Breaking News

ಗಂಗಾವತಿ ಖಾಸಗಿ ಶಾಲೆಗೆ ಸರ್ಕಾರದ ಆದೇಶ ಲೆಕ್ಕಕ್ಕಿಲ್ಲ.!! ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು.!?

ಗಂಗಾವತಿ ಖಾಸಗಿ ಶಾಲೆಗೆ ಸರ್ಕಾರದ ಆದೇಶ ಲೆಕ್ಕಕ್ಕಿಲ್ಲ.!!
ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು.!?


ತುಂಗಾವಾಣಿ.
ಗಂಗಾವತಿ: ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ರಾಜ್ಯ ಮತ್ತು ಕೇದ್ರ ಸರ್ಕಾರದ ಆದೇಶ ಲೆಕ್ಕಕ್ಕೆ ಇಲ್ವಂತೆ ವರ್ತಿಸುತ್ತಿದೆ,
ಹೌದು ಇಡೀ ಜಗತ್ತೆ ಕರೊನಾ ಎನ್ನುವ ಹೆಮ್ಮಾರಿ ನಡುವೆ ನಲುಗಿ ಹೋಗಿದೆ ನಾಡಿನಾದ್ಯಂತ ಲಾಕ್ ಡೌನ್ ಜಾರಿ ಮಾಡಿ ಕರೊನಾ ಹತ್ತಿಕ್ಕುವ ಕೆಲಸ ಮಾಡಿದರೂ ಸಹ ಹತೋಟಿಗೆ ಬಂದಿದಿಲ್ಲ ಈಗಲೂ ಸಹ ಕೆಲ ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಇಲಾಖೆ ಮತ್ತು ಜನತೆ ಪಾಲಿಸುತ್ತಾ ಬರುತ್ತಿದ್ದಾರೆ,
ಸರ್ಕಾರ ವಿಧ್ಯಾಗಮ ಎಂದು ವಠಾರ ಶಾಲೆ ಅಂತ ಪ್ರಾರಂಭಿಸಿತ್ತು, ಆಗ ಭೋದನೆ ಮಾಡುವ ಕೊಪ್ಪಳ ಜಿಲ್ಲೆಯ ಹದಿಮೂರು ಜನ ಶಿಕ್ಷಕರಿಗೆ ಸೊಂಕು ತಗುಲಿ ಮೃತಪಟ್ಟ ಘಟನೆಯು ನಡೆದಿದೆ, ಅದರಲ್ಲಿ ಗಂಗಾವತಿ ತಾಲ್ಲೂಕಿನಲ್ಲೆ ಒಂಬತ್ತು ಜನ ಯಲಬುರ್ಗಾ ದಲ್ಲಿ ಇಬ್ಬರು ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ತಲಾ ಒಬ್ಬರು ಶಿಕ್ಷಕರನ್ನು ಕಳೆದು ಕೊಂಡಿದೆ, ಮಕ್ಕಳಿಗೆ ಸೊಂಕು ಹತ್ತುವ ಭೀತಿಯಿಂದ ಸರ್ಕಾರ ವಿಧ್ಯಾಗಮ ಎನ್ನುವ ಕಾರ್ಯಕ್ರಮ ವನ್ನು ಸಹ ರದ್ದು ಮಾಡಿತ್ತು ಆ ಘಟನೆ ಇನ್ನೂ ಮಾಸಿಲ್ಲ.!

ಆದರೆ ಗಂಗಾವತಿ ನಗರದ ಸೆಂಟ್ ಪಾಲ್ಸ್ ಸ್ಕೂಲ್‌ ಮಾತ್ರ 8,9,10, ಶಾಲೆಯ ಮಕ್ಕಳಿಗೆ ಪರಿಕ್ಷ ನಡೆಸುತ್ತಿರುವುದು ಬೆಳಕಿಗೆ ಬಂದಿದೆ,
ಖುದ್ದಾಗಿ ತುಂಗಾವಾಣಿ ಸ್ಕೂಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಶಿಕ್ಷಕಿ ಹೇಳಿರುವ ಹೇಳಿಕೆಯು ಸಹ ಈ ವಿಡಿಯೊ ದಲ್ಲಿದೆ.!

ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಪರ್ಕಿಸಿದಾಗ ಅವರು ಹೇಳಿದ್ದು ನಾವು ಮತ್ತು ಸರ್ಕಾರ ಯಾವುದೇ ರೀತಿಯ ಪರವಾನಿಗೆ ಕೊಟ್ಟಿಲ್ಲ ಯಾವ ಆಧಾರದ ಮೇಲೆ ಪರೀಕ್ಷೆ ಮಾಡುತ್ತಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೆನೆ ಎಂದು ತಿಳಿಸಿದ್ದಾರೆ,
ಒಟ್ನಲ್ಲಿ ಈ ಖಾಸಗಿ ಶಾಲೆಯ ಆಡಳಿತ ಮಂಡಳಿ ಮತ್ತು ಮಾಲೀಕರ ವಿರುದ್ಧ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡ ಬೇಕಿದೆ..!?

ಸತ್ಯ ಮತ್ತು ನೈಜ ಸುದ್ದಿಗಳ ಕೈಗನ್ನಡಿ -ತುಂಗಾವಾಣಿ

Get Your Own News Portal Website 
Call or WhatsApp - +91 84482 65129

Check Also

ಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ. ಬಂಧನ.

ಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ.! ಬಂಧನ.   ತುಂಗಾವಾಣಿ ಗಂಗಾವತಿ ಎ 18 ನಗರದ …