Breaking News

ತಿಪ್ಪೇರುದ್ರಸ್ವಾಮಿಗೆ ಒಲೆಯುತ್ತಾ ಕಾಡಾ ಅಧ್ಯಕ್ಷ ಸ್ಥಾನ..!?

ತಿಪ್ಪೇರುದ್ರಸ್ವಾಮಿ ಗೆ ಒಲೆಯುತ್ತಾ ಕಾಡಾ ಅಧ್ಯಕ್ಷ ಸ್ಥಾನ..!?


ತುಂಗಾವಾಣಿ.
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಮಸ್ಕಿಯ ಬಸವನಗೌಡ ತುರವಿಹಾಳ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ನಿನ್ನೆ ತಾನೆ ಸೇರ್ಪಡೆ ಯಾಗಿದ್ದಾರೆ,
ಕಾಡಾ ಅಧ್ಯಕ್ಷ ಸ್ಥಾನ ಕಾಲಿ ಇದ್ದು ಅದನ್ನು ಗಂಗಾವತಿ ನಗರ ಬಿಜೆಪಿಯ ಹಿರಿಯ ಪ್ರಭಾವಿ ನಾಯಕ ರೈತ ಮುಖಂಡ ವಕೀಲ ತಿಪ್ಪೇರುದ್ರಸ್ವಾಮಿ ಯವರಿಗೆ ಒಲೆಯುತ್ತಾ, ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,


ಬಿಜೆಪಿ ಪಕ್ಷ ಸಂಘಟನೆಯ ಮುಂಚೂಣಿಯ ನಾಯಕ ಹೋರಾಟಗಾರ ತಿಪ್ಪೇರುದ್ರಸ್ವಾಮಿ, ಇವರ ಕೊಡುಗೆ ಬಿಜೆಪಿಗೆ ಬಹಳಷ್ಟು ಇದೆ ಗಂಗಾವತಿ ತಾಲ್ಲೂಕಲ್ಲದೆ ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ತಳ ಮಟ್ಟದಿಂದ ಹಿಡಿದು ಕ್ಷೇತ್ರದಲ್ಲಿ ಪಕ್ಷದ ಶಾಸಕರಾಗುವವರೆಗೂ ಇವರ ಶ್ರಮ ಬಹಳಷ್ಟು ಇದೆ ಎನ್ನುತ್ತಾರೆ ಅವರ ಅಭಿಮಾನಿಗಳು,

ತಿಪ್ಪೇರುದ್ರಸ್ವಾಮಿ ಮನಸ್ಸು ಮಾಡಿದ್ದರೆ ಎಂದೊ ಶಾಸಕರಾಗುತ್ತಿದ್ದರು ಆದರೆ ಬಿಜೆಪಿಯಲ್ಲಿ ಅವರನ್ನು ಕಾಲು ಎಳೆಯುವವರೆ ಜಾಸ್ತಿ, ಈಗಂತೂ ಅವರನ್ನು ಶಾಸಕರನ್ನಾಗಿ ಮಾಡುವುದು ದೂರದ ಮಾತು, ಅಟ್ಲಿಷ್ಟ್ ಕಾಡಾ ಅಧ್ಯಕ್ಷರನ್ನಾಗಿ ಮಾಡಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಇಂಚಿಂಚೂ ಮಾಹಿತಿ ನೀರು ಪೂರೈಕೆ ಜಾಲದ ತಿಳಿವಳಿಕೆ ತಿಪ್ಪೇರುದ್ರಸ್ವಾಮಿಗೆ ಗೊತ್ತು, ಮೂರು ಜಿಲ್ಲೆಯ ಜನಪ್ರತಿಸಿಧಿಗಳು ಅಲ್ಲದೆ ರಾಜ್ಯ ನಾಯಕರ ಸಂಪರ್ಕವನ್ನು ಹೊಂದಿರುವ ಏಕೈಕ ವ್ಯಕ್ತಿ,!

ಆದರೆ ಬಿಜೆಪಿ ಪಕ್ಷ ಮಾತ್ರ ಇವರನ್ನು ಭಾಷಣಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದೆ, ಎನ್ನುವ ಮಾತು ಕೇಳಿ ಬರ್ತಿವೆ..!!

ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನವಂತೂ ಇಲ್ಲ, ಬಂದಿದ್ದ ನಿಗಮ ಮಂಡಳಿಯು ಸಹ ವಾಪಸ್ಸು ಕಸಿದು ಕೊಂಡಾರ, ಈಗ ಜಿಲ್ಲೆಯ ಬಿಜೆಪಿಯ ಎಲ್ಲಾ ನಾಯಕರು ಒಕ್ಕೂರಲಿನ ದ್ವನಿ ಎತ್ತಿದ್ದೆ ಯಾದಲ್ಲಿ, ಖಂಡಿತ ತಿಪ್ಪೇರುದ್ರಸ್ವಾಮಿ ಯವರಿಗೆ ಒಲಿಯಲಿದೆ, ಆದರೆ ಕೊಪ್ಪಳ ಜಿಲ್ಲೆಯ ಬಿಜೆಪಿಯ ಜನಪ್ರತಿಸಿಧಿಗಳು ಮತ್ತು ರಾಜ್ಯದ ಹಿರಿಯ ನಾಯಕರ ಸಂಪರ್ಕದಲ್ಲಿರುವ ಈ ಭಾಗದ ನಾಯಕರು ಮನಸ್ಸು ಮಾಡಿದರೆ ಗಂಗಾವತಿಗೆ ಕಾಡಾ ಅದ್ಯಕ್ಷ ಸ್ಥಾನ ದೊರಕುವುದು 100% ಗ್ಯಾರಂಟಿ,
ಆದರೆ ಇದಕ್ಕೆ ಜಿಲ್ಲೆಯ ನಾಯಕರು ಮನಸ್ಸು ಮಾಡ್ತಾರಾ..!? ಅಥವಾ ತಿಪ್ಪೇರುದ್ರಸ್ವಾಮಿಗೆ ಕಾಡಾ ಅಧ್ಯಕ್ಷರನ್ನಾಗಿ ಮಾಡಿದ್ರೆ ನಮಗೆನಾದರು ಲಾಭ ಇದೆಯಾ ಎನ್ನುವ ಜನರು ತಿಪ್ಪೇರುದ್ರಸ್ವಾಮಿ ಸುತ್ತಲೂ ಇದ್ದಾರಾ.!
ಏನೆ ಇರಲಿ ಪಕ್ಷಕ್ಕಾಗಿ ಈಡಿ ಜೀವನವೇ ಮುಡುಪಾಗಿಟ್ಟ ತಿಪ್ಪೇರುದ್ರಸ್ವಾಮಿ ಗೆ ಕಾಡಾ ಅಧ್ಯಕ್ಷ ಸ್ಥಾನ ಒಲೆಯುತ್ತಾ ಅಥವಾ ಇಲ್ವಾ ಮುಂದಿನ ದಿನಮಾನದಲ್ಲಿ ಕಾದು ನೋಡ ಬೇಕಿದೆ..!?

ಸತ್ಯ ಮತ್ತು ನೈಜ ಸುದ್ದಿಗಳ ಕೈಗನ್ನಡಿ -ತುಂಗಾವಾಣಿ

Get Your Own News Portal Website 
Call or WhatsApp - +91 84482 65129

Check Also

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!?

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಪಶುವೈದ್ಯ ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!? ತುಂಗಾವಾಣಿ. ಗಂಗಾವತಿ: ಪೆ-20 ತಾಲ್ಲೂಕಿನ ತಾಲ್ಲೂಕು ಪಂಚಾಯತನ …