Breaking News

ಪಕೀರನ ವೇಷ ಧರಿಸಿ ವಂಚಿಸುತ್ತಿದ್ದ ವಂಚಕರ ಬಂಧನ.

ಪಕೀರನ ವೇಷ ಧರಿಸಿ ವಂಚಿಸುತ್ತಿದ್ದ ವಂಚಕರ ಬಂಧನ.

ತುಂಗಾವಾಣಿ
ಕೊಪ್ಪಳ ನ 07 ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ಮುಸ್ಲಿಂ ಧರ್ಮಗುರು ಫಕೀರರ ವೇಷ ಧರಿಸಿ ಜನರಿಗೆ ವಂಚಿಸುತ್ತಿದ್ದ ಮೂವರು ಯುವಕರನ್ನು ಗ್ರಾಮದ ನಾಗರೀಕರು ಹಿಡಿದು ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.

ಕಲ್ಬುರ್ಗಿ ಜಿಲ್ಲೆಯ ಹುಮ್ನಾಬಾದ ನವರೆಂದು ಹೇಳಿಕೊಳ್ಳುತ್ತಿರುವ ಯುವಕರಾದ ಆನಂದ, ಸುನೀಲ್ ಹಾಗು ರಾಹುಲ್ ಎಂಬ ಯುವಕರು ಮುಸ್ಲಿಂ ಜನಾಂಗದ ಫಕೀರರ ತರಹ ಜುಬ್ಬಾ , ತಲೆಗೆ ಟೊಪ್ಪಿಗೆ, ಪೇಟಾ ಹಾಕಿಕೊಂಡು ಗ್ರಾಮಕ್ಕೆ ಬಂದು ಗ್ರಾಮದ ಜನರಿಗೆ ದುವಾ ಮಾಡುವುದಾಗಿ ತಾಯತ ಮಾಡಿಕೊಡುವುದಾಗಿ ನಂಬಿಸಿ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದರು.
ಯಾವದೇ ಮನೆಯವರು ಹಣ ಕೊಡಲು ಒಪ್ಪದಿದ್ದಾಗ ಅವರಿಗೆ ಶಾಪ ಕೊಡುವುದು ದರ್ಗಾ ದೇವರ ಹೆಸರಿನಲ್ಲಿ ಹೆದರಿಸಿವುದು ಮಾಡುತ್ತಿರುವುದು ಕಂಡು ಗ್ರಾಮದ ಯುವಕರು ಇವರನ್ನು ಹಿಡಿದು ವಿಚಾರಿಸಲಾಗಿ ಇವರು ಅಸಲಿ ಫಕೀರರು ಅಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.
ದುಡ್ಡಿಗೋಸ್ಕರ ಮುಸ್ಲಿಂ ಪಕೀರರ ವೇಷ ಧರಿಸಿ ದುಡ್ಡು ಮಾಡುವ ದಂದೆ ಇಳಿದಿದ್ದು ಒಂದು ಸಮುದಾಯದ ಹೆಸರನ್ನು ಕೆಡಿಸಲು ಸಂಚು ಮಾಡುತ್ತಿರುವ ಇಂತಹ ವಂಚಕರಿಂದ ಜಿಲ್ಲೆಯ ಜನತೆ ಜಾಗರೂಕ ರಾಗಿರಬೇಕೆಂದು ತುಂಗಾವಾಣಿ ಆಶಯವಾಗಿದೆ.

ಸತ್ಯ ಮತ್ತು ನೈಜ ಸುದ್ದಿಗಳ ಕೈಗನ್ನಡಿ -ತುಂಗಾವಾಣಿ

ಸುದ್ದಿ ಇಷ್ಟವಾದರೆ ಇನ್ನೊಬ್ಬರಿಗೆ ಶೇರ್ ಮಾಡಿ.

Check Also

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ.

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ. ತುಂಗಾವಾಣಿ ಗಂಗಾವತಿ ನ-18 ಗಂಗಾವತಿ ನಗರದ ಜನನಿಬಿಡ ವೃತ್ತವಾದ ಸಿಬಿಎಸ್ …