ಗಂಗಾವತಿ: ಚಿರತೆ ದಾಳಿ ಯುವಕನನ್ನು ಕೊಂದು ತಿಂದು ಬಿಸಾಕಿದ ನರ ಭಕ್ಷಕ,
ಆತಂಕದಲ್ಲಿ ಆನೆಗೊಂದಿ ಸುತ್ತಮುತ್ತಲಿನ ಜನ.!
ತುಂಗಾವಾಣಿ.
ಗಂಗಾವತಿ : ತಾಲೂಕಿನ ಆನೆಗುಂದಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಳಿ ಬುಧವಾರ ತಡರಾತ್ರಿ, ನರಭಕ್ಷಕ ಚಿರತೆಯೊಂದು ಯುವಕನನ್ನು ಎಳೆದುಕೊಂಡು ಹೋಗಿ ಭೀಕರವಾಗಿ ಕೊಂದು ತಿಂದು ಹಾಕಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಆನೆಗೊಂದಿ ಗ್ರಾಮದ ನಿವಾಸಿ ದುರ್ಗಾದೇವಿ ದೇವಸ್ಥಾನದ ಅಡುಗೆ ಭಟ್ಟ ಹುಲುಗೇಶ ದೊಡ್ಡ ಈರಪ್ಪ ಬಾಗಪತಿ (24) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಸ್ಥಳೀಯ ದುರ್ಗಾದೇವಿ ದೇವಸ್ಥಾನದಲ್ಲಿ ಅಡುಗೆ ಭಟ್ಟ ನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ,
ಈ ಹಿಂದೆ ಮಗುವಿನ ಮೇಲೆ ಮತ್ತು ಚಿಕ್ಕರಾಂಪುರ್ ಗ್ರಾಮದ ಮಹಿಳೆಯ ಮೇಲೆ ಚಿರತೆಗಳು ದಾಳಿ ಮಾಡಿದ್ವು ಆದರೆ ಅವರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದವು,
ಆದರೆ ಇದು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಚಿರತೆಗೆ ಯುವಕನ ಬಲಿ ತೆಗೆದುಕೊಂಡಿದ್ದು ಇದೆ ಮೊದಲು,
ಚಿರತೆ ವ್ಯಕ್ತಿಯನ್ನು ಕೊಂದು ತಿಂದಿರುವುದರಿಂದ ಆನೆಗೊಂದಿ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ವ್ಯಕ್ತಿಯನ್ನು ಎಳೆದೊಯ್ದು ತಿಂದು ಹಾಕಿದ್ದು, ದೇಹದಿಂದ ಬುರುಡೆ ಕಿತ್ತು ಬಂದಿದ್ದು, ಇದೀಗ ವ್ಯಕ್ತಿಯ ಮಾಂಸದ ಅವಶೇಷಗಳು ಪತ್ತೆಯಾಗಿವೆ.
ಆನೆಗೊಂದಿ ಮತ್ತು ಸುತ್ತಮುತ್ತಲಿನ ಜನರು ಭಯ ಭೀತರಾಗಿರುವುದಂತೂ ಸತ್ಯ,
ಈ ಭಾಗದಲ್ಲಿ ಅನೇಕ ಚಿರತೆಗಳು ವಾಸವಾಗಿವೆ, ಆದರೆ ಅಲ್ಲೊಂದು ಇಲ್ಲೊಂದು ಕಾಣ ಸಿಗುತ್ತವೆ, ಅದನ್ನು ಗಂಭಿರವಾಗಿ ಪರಿಗಣಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಅಧಿಕಾರಿಗಳು ಎಂದು ಸ್ಥಳಿಯರು ದೂರುತ್ತಿದ್ದಾರೆ.!
ಅಕ್ರಮ ಕಲ್ಲು ಗಣಿಗಾರಿಕೆ ಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ,
ರಾಂಪೂರ ಮಲ್ಲಾಪುರ ಆನೆಗೊಂದಿ ಭಾಗದ ಒಂದೊಂದು ಗುಡ್ಡಗಳು ಒಂದೊಂದು ಇತಿಹಾಸ ಹೇಳ್ತಾವೆ, ಆದರೆ ಈ ಗ್ರಾಮಗಳ ಭಾಗದಲ್ಲಿ ಅತೀ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ, ಹಣದಾಸೆಗೆ ಬಲಾಢ್ಯ ವ್ಯಕ್ತಿಗಳು ಅಕ್ರಮವಾಗಿ ಕಲ್ಲುಗಳನ್ನು ಸ್ಪೋಟಿಸುತ್ತಿರುವುದರಿಂದ ಗುಡ್ಡಗಾಡು ಪ್ರದೇಶದಲ್ಲಿ ಇರುವ ವನ್ಯಜೀವಿಗಳ ಸಂಕುಲಗಳು ನಾಡಿಗೆ ಬರಲು ಆರಂಭಿಸಿವೆ, ನಮ್ಮ ಪತ್ರಿಕೆ ಸೇರಿ ಅನೇಕ ಪತ್ರಿಕೆಗಳು ವರದಿ ಮಾಡಿದ್ರು ಅಧಿಕಾರಿಗಳು ಮಾತ್ರ ಎಂಜಲು ಕಾಸಿಗೆ ಸೋತು ಹೋಗಿದ್ದಾರೆ.!
ಅದರ ಅವಾನತಿಗೆ ಇಂದು ಒಂದು ಜೀವ ಕಳೆದು ಕೊಂಡಿದೆ,
ಈಗಲಾದರೂ ಎಚ್ಚತ್ತು ಕೊಂಡು ಅಕ್ರಮಕ್ಕೆ ಕಡಿವಾಣ ಹಾಕ್ತಾರಾ ಅಧಿಕಾರಿಗಳು ಕಾದು ನೋಡ ಬೇಕಿದೆ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
