ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ.
ತುಂಗಾವಾಣಿ.
ಗಂಗಾವತಿ,’ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಇಡೀ ಜಗತ್ತೆ ಬೇಸರಕೊಂಡಿದೆ. ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು. ಕೋಟ್ಯಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ದೇವ ಕರುಣೆ ತೋರಲಿಲ್ಲ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ ಎಂದು ರಾಜ್ಯಾಧ್ಯಕ್ಷ ಎಸ್,ಹೆಚ್, ಮುಧೋಳ ತಿಳಿಸಿದರು.
ಇ ಸಂದರ್ಭದಲ್ಲಿ ಜಿಲ್ಲಾ ಯುವಘಟಕ ಅಧ್ಯಕ್ಷ ಕೆ,ಸುಬ್ರಹ್ಮಣ್ಯಂ ಹೆಬ್ಬಾಳ ಕ್ಯಾಂಪ್,ಹಿರಿಯ ಮುಖಂಡ ಸೈಯದ್ ಅಲಿ,ರಾಯ್ಕರ್, ರಫೀಕ್ ಸಂಪಂಗಿ, ಕರಿಯಪ್ಪನಾಯಕ,ಅನಿಲ್ ಕುಮಾರ್,ನಾಗರಾಜ,ಮಹೇಶ್ ಆನೆಗೊಂದಿ, ಮಲ್ಲಯ್ಯ, ಇನ್ನೂ ಅನೇಕರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
