ಹಿಂಸಾಚಾರದ ನಡುವೆ ಸೌಹಾರ್ದತೆ ಮೆರೆದ ಮುಸ್ಲಿಮ್ ಯುವಕರು..!
ಈ ವಿಡಿಯೊ ಪುಲ್ ವೈರಲ್ ಆಗಿದೆ..!
ತುಂಗಾವಾಣಿ.
ಬೆಂಗಳೂರು:ಆ,12, ಬೆಂಗಳೂರಿನಲ್ಲಿ ನಿನ್ನೆ ನಡೆದ ಹಿಂಸಾಚಾರ ಯಾವತ್ತೂ ಕೆಟ್ಟ ನೆನಪಾಗಿ ಉಳಿಯುತ್ತದೆ. ಆದರೀಗ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರದ ನಡುವೆಯೂ ಅದ್ಭುತ ದೃಶ್ಯವೊಂದು ಕಂಡು ಬಂದಿದ್ದು, ಇದನ್ನು ಅನೇಕ ಮಂದಿ ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಶಾಸಕರ ಮನೆ, ರಸ್ತೆಯಲ್ಲಿದ್ದ ವಾಹನಗಳಿಗೆ ತಗುಲಿದ ಬೆಂಕಿ ಹೀಗೆ ಗಲಭೆಯ ನಡುವೆಯೂ ಕಂಡು ಬಂದ ಸಾಮರಸ್ಯ ಸೌಹಾರ್ದತೆಯ ಸದ್ಯ ಸದ್ದು ಮಾಡುತ್ತಿದೆ.
ದೇಗುಲಕ್ಕೆ ತಾವೆ ಸರಪಳಿ ನಿರ್ಮಿಸಿಕೊಂಡು ದೇಗುಲ ರಕ್ಷಿಸಿದ ಮುಸ್ಲಿಮ್ ಯುವಕರ ವಿಡಿಯೊ ವೈರಲ್..!
ಹೌದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ನಡೆಸಿ ಕಲ್ಲು ತೂರಾಟ ಮಾಡಿದ್ದಲ್ಲದೇ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಹೀಗಿರುವಾಗ ಶಾಸಕರ ಮನೆಯ ಎದುರು ಭಾಗದಲ್ಲೇ ಇರುವ ಹನುಮಾನ್ ದೇಗುಲವನ್ನು ಮುಸ್ಲಿಂ ಯುವಕರು ಮಾನವ ಸರಪಳಿ ನಿರ್ಮಿಸಿಕೊಂಡು ದೇವಾಲಯವನ್ನು ರಕ್ಷಿಸಿ ಸಾಮರಸ್ಯದ ಸೌಹಾರ್ದತೆ ಮೆರೆದಿದ್ದಾರೆ..!
ಸದ್ಯ ಈ ವಿಡಿಯೋ ಕೂಡಾ ಭಾರೀ ವೈರಲ್ ಆಗಿದೆ. ಜೊತೆಗೆ ಸ್ಥಳೀಯ ಯುವಕರ ಈ ನಡೆಗೆ ಸೋಶೀಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.!
ಏನಿದು ಘಟನೆ..?
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಹೋದರ ಸಂಬಂಧಿ ನವೀನ್ ಎಂಬಾತ ಮಹಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ..!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
