ಜಿಲ್ಲೆಯಲ್ಲಿ ಇಂದು 79 ಪಾಜಿಟಿವ್ ಪತ್ತೆ.
ಸಾವಿರ ಗಡಿ ದಾಟಿದ ಸೊಂಕಿತರ ಸಂಖ್ಯೆ..!
ತುಂಗಾವಾಣಿ.
ಕೊಪ್ಪಳ: ಜು29, ಜಿಲ್ಲೆಯಲ್ಲಿ ಇಂದು 79 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿದೆ ಸೊಂಕಿತರ ಸಂಖ್ಯೆ, 1046 ಸೊಂಕಿತರು, ಜಿಲ್ಲೆಯಲ್ಲಿ ಇಂದು 79 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 47 ಕುಷ್ಟಗಿ ತಾಲೂಕಿನಲ್ಲಿ 13 ಕೊಪ್ಪಳ ತಾಲೂಕಿನಲ್ಲಿ 11 ಯಲಬುರ್ಗಾ ತಾಲ್ಲೂಕಿನಲ್ಲಿ ಒಂಬತ್ತು ಪ್ರಕರಣಗಳು ಪತ್ತೆಯಾಗಿವೆ,
ಇಂದು ಗುಣಮುಖರಾಗಿ ಬಿಡುಗಡೆ ಯಾದವರು 50 ಜನ,
ಒಟ್ಟಾರೆ ಜಿಲ್ಲೆಯಲ್ಲಿ ಬಿಡುಗಡೆ ಯಾದವರು 644 ,
192 ಜನರು ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಐಸೋಲೆಷನ್ ನಲ್ಲಿ 116. ಜನರಿದ್ದಾರೆ,
72 ಜನರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ,
ಇಂದು ಇಬ್ಬರು ಮೃತಪಟ್ಟವರನ್ನು ಸೇರಿಸಿ ಒಟ್ಟು 23 ಜನ ಸಾವನ್ನಪ್ಪಿದ್ದಾರೆ..!

ಆತ್ಮೀಯ ಓದುಗರರೇ.
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ ತುಂಗಾವಾಣಿ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕಕಾರಿಯಾಗಿ ತಗೆದುಕೊಳ್ಳ ಬೇಡಿ, 
ನಮ್ಮ ಪತ್ರಿಕೆ ಕರೊನಾ ಸಂದರ್ಭದಲ್ಲಿ ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

 Tungavani News Latest Online Breaking News
Tungavani News Latest Online Breaking News
				